ಆದಿತ್ಯ ಗಾಧ್ವಿ (ಜನನ 3 ಏಪ್ರಿಲ್ 1994) ಭಾರತದ ಗುಜರಾತ್‌ನಲ್ಲಿ ಜನಿಸಿದ ಹಿನ್ನೆಲೆ ಗಾಯಕ ಮತ್ತು ಗೀತರಚನೆಕಾರ . ಅವರು ವಿವಿಧ ಭಾರತೀಯ ಭಾಷೆಗಳಲ್ಲಿ ಹಲವಾರು ಪ್ರಸಿದ್ಧ ಹಾಡುಗಳನ್ನು ಹೇಳಿದ್ದಾರೆ . ಅವರು ಗುಜರಾತಿ ಚಲನಚಿತ್ರ ಗೀತೆಗಳನ್ನು ಹಾಡುತ್ತಾರೆ. ಇವರ ಸೋಲೋ ಗಾಯನದ ಹಲವು ಗೀತೆಗಳು ಜನಪ್ರಿಯವಾಗಿವೆ ಅವರ ಇತ್ತೀಚಿನ ಹಾಡುಗಳಲ್ಲಿ ಖಲಾಸಿ, ರಂಗ್ ಮೊರ್ಲಾ, ಗುಜರಾತ್ ಟೈಟಾನ್ಸ್ ಗೀತೆ ಆವಾ ದೇ ಹೆಚ್ಚು ಜನಪ್ರಿಯವಾಗಿವೆ == ಇವರು ಹಾಡಿದ ಜನಪ್ರಿಯ ಗೀತೆಗಳು == ಖಲಾಸಿ - ಕೋಕ್ ಸ್ಟುಡಿಯೋ ಭಾರತ್ ನಲ್ಲಿ ಹೇಳಿದ ಈ ಹಾಡು ಯೂಟ್ಯೂಬಿನಲ್ಲಿ ೧೧೩ ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ರಂಗ್ ಮೊರ್ಲಾ, ಗುಜರಾತ್ ಟೈಟಾನ್ಸ್ ಐಪಿಎಲ್ ಕ್ರಿಕೆಟ್ ತಂಡದ ಗೀತೆ ಆವಾ ದೇ == ಆರಂಭಿಕ ಜೀವನ == ಗಾಧ್ವಿಯವರು ಗುಜರಾತ್‌ನಲ್ಲಿ ಗುಜರಾತಿ ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಯೋಗೇಶ್ ಗಧ್ವಿ. ಅವರು ಗುಜರಾತಿ, ಹಿಂದಿ ಮತ್ತು ಮರಾಠಿ ಮಾತನಾಡುತ್ತಾರೆ. == ವೃತ್ತಿ == ಇವರು "- ಲೋಕ ಗಾಯಕ್ ಗುಜರಾತ್" ವಿಜೇತರಾಗಿದ್ದರು . ಅವರ ' ಕಾಮಸೂತ್ರ3D ' ಚಿತ್ರದ ೨ ಹಾಡುಗಳು ೨೦೧೪ರಲ್ಲಿ ರಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದವು. ಇವರು ಜಾನಪದ ಮತ್ತು ಸೂಫಿ ಹಾಡುಗಳನ್ನು ಹಾಡುತ್ತಾರೆ. ಅವರು 18 ನೇ ವಯಸ್ಸಿನಲ್ಲಿ ಗುಜರಾತ್‌ನ ಅತಿ ಹೆಚ್ಚು ಗಳಿಸಿದ "ಲೋಕ ಗಾಯಕ್ ಗುಜರಾತ್" ಕಾರ್ಯಕ್ರಮದ ವಿಜೇತರಾಗಿದ್ದರು. "ಲೋಕ ಗಾಯಕ್ ಗುಜರಾತ್" ಕಾರ್ಯಕ್ರಮವನ್ನು ಗೆದ್ದ ನಂತರ, ಗಧ್ವಿ ಗುಜರಾತಿನ ಜಾನಪದ ಸಂಗೀತವನ್ನು ಗುಜರಾತ್ ಮತ್ತು ಹಾಂಗ್ ಕಾಂಗ್‌ನಾದ್ಯಂತ ಪ್ರದರ್ಶಿಸಿದರು. ಜನವರಿ 26 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗುಜರಾತ್‌ನ ಟ್ಯಾಬ್ಲೋವನ್ನು ಪ್ರತಿನಿಧಿಸಲು ಗಾಧ್ವಿ ತಮ್ಮ ಧ್ವನಿಯನ್ನು ನೀಡಿದರು. ಈ ಮೆರವಣಿಗೆಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಾವಿರಾರು ಇತರ ಅತಿಥಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗಾಧ್ವಿ ಅವರು ಎ.ಆರ್ ರೆಹಮಾನ್ ಅವರ ಜೊತೆ ದುಬೈ, ವಡೋದರಾ ಮುಂತಾದ ಸ್ಥಳಗಳಲ್ಲಿ ಹಿನ್ನೆಲೆ ಗಾಯಕರಾಗಿ ಭಾಗವಹಿಸಿದ್ದರು. ಇವರು ಬಾಲಿವುಡ್ ಚಲನಚಿತ್ರ "ಲೇಕರ್ ಹಮ್ ದೀವಾನಾ ದಿಲ್" ಚಲನಚಿತ್ರದಲ್ಲಿ ಕೆಲಸ ಮಾಡಿದ್ದಾರೆ . ಇವರು ೧೧ ಚಲನಚಿತ್ರಗಳಲ್ಲಿ ಮತ್ತು ೧೭ ಧ್ವನಿಮುದ್ರಿಕೆಗಳಲ್ಲಿ ಹಾಡಿದ್ದಾರೆ. ಐಪಿಎಲ್ 2023 ರಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯದ ಮೊದಲು ಆದಿತ್ಯ ಗುಜರಾತ್ ಟೈಟಾನ್ಸ್ನ ಗೀತೆ ' ಆವಾ ದೇ ' ಅನ್ನು ಹಾಡಿದ್ದರು. ಈ ಹಾಡನ್ನು ಗುಜರಾತ್ ಟೈಟನ್ಸ್ ಮತ್ತು ಕೆ.ಕೆ.ಆರ್ ತಂಡಗಳ ಪಂದ್ಯದ ಮೊದಲು ಪ್ರದರ್ಶಿಸಲಾಗಿತ್ತು. ಗಧ್ವಿ ಅವರು ಮತ್ತು ಕೆನಡಾದಲ್ಲಿ ಅಂತಾರಾಷ್ಟ್ರೀಯ ಲೈವ್ ಸ್ಟೇಜ್ ಶೋ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕೋಕ್ ಸ್ಟುಡಿಯೋ ಭಾರತ್‌ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರು ' ಶರತೋ ಲಗು ', ' ಹೇಳರೋ ' ಮತ್ತು ' ಲವ್ ನಿ ಭಾವೈ' ಮುಂತಾದ ಹಿಟ್‌ ಹಾಡುಗಳನ್ನು ಹೇಳಿದ್ದಾರೆ. ನವರಾತ್ರಿ ಹಬ್ಬದಂದು ಗಾಧ್ವಿ ಅವರು "ಡಕ್ಲಾ" ಹಾಡನ್ನು ಹೇಳುತ್ತಿದ್ದಾಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಆ ಹಾಡಿಗೆ ದಾಂಡಿಯಾ ನೃತ್ಯವನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಹಾಡು 'ಖಲಾಸಿ' ಮತ್ತು ಅದರ ಗಾಯಕ ಆದಿತ್ಯ ಗಾಧ್ವಿಯನ್ನು ಶ್ಲಾಘಿಸಿದರು. ಜುಲೈ 2023 ರಲ್ಲಿ ಕೋಕ್ ಸ್ಟುಡಿಯೋ ಇಂಡಿಯಾ ಬಿಡುಗಡೆ ಮಾಡಿದ ಹಾಡು ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತು. ಗಾಯಕ ಮತ್ತು ಹಾಡಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಆದಿತ್ಯ ಗಾಧ್ವಿ ತಮ್ಮ ಮೊದಲ ಭೇಟಿಯ ಬಗ್ಗೆ ಪ್ರಸ್ತಾಪಿಸಿದ್ದ ಪೋಸ್ಟ್ ಅನ್ನು ಪ್ರಧಾನಿ ಮೋದಿ ಮರುಟ್ವೀಟ್ ಮಾಡಿದ್ದಾರೆ. == ಧ್ವನಿಮುದ್ರಿಕೆ == == ಚಲನಚಿತ್ರ ಹಾಡುಗಳು == == ಸಾಧನೆಗಳು ಮತ್ತು ಪ್ರಶಸ್ತಿಗಳು == ಅತ್ಯುತ್ತಮ ಸಾಂಪ್ರದಾಯಿಕ ಜಾನಪದ ಏಕಗೀತೆಗಾಗಿ ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ ಅವರು 2014 ರಲ್ಲಿ ಆಸ್ಕರ್‌ಗೆ ಆಯ್ಕೆಯಾದ ಕಾಮಸೂತ್ರ3D ಚಲನಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ == ಉಲ್ಲೇಖಗಳು ==